“ ಸ್ವಾತಂತ್ರ್ಯ ದಿನಾಚರಣೆ 2017 ”
70 ರ ಹರೆಯದ “ ಸ್ವಾತಂತ್ರ್ಯ ದಿನಾಚರಣೆ 2017 ” ಸ್ವಾತಂತ್ರ್ಯ ದಿನಾಚರಣೆ ಎಂಬ ಪದ ಕೇಳಿದರೆ , ಓದಿದರೆ ಸಾಕು , ನಮಗೆಲ್ಲರಿಗೂ ತಟ್ಟನೆ ನೆನಪಾಗುವುದು ಆಗಸ್ಟ್ 15 ರ ನಮ್ಮ ಭವ್ಯ ಭಾರತದ ಸ್ವಾತಂತ್ರ್ಯ ದಿನಾಚರಣೆ . 1947 ರಿಂದ ಆಚರಿಸಿಕೊಂಡು ಬಂದಿದ್ದು , 2017 ಆಗಸ್ಟ್ 15 ರಂದು 70 ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲು ಸಿದ್ಧರಾಗಿದ್ದೇವೆ . ಇದು ನಮ್ಮ ದೇಶದ ಎಲ್ಲಾ ಧಾರ್ಮಿಕ ಹಬ್ಬಗಳಷ್ಟೇ ಪ್ರಾಮುಖ್ಯತೆ ಹೊಂದಿರುವ ದೇಶಾದ್ಯಂತ ಆಚರಿಸುವ ಅತಿದೊಡ್ಡ ಹಬ್ಬ ಎಂದರೆ ತಪ್ಪಾಗಲಾರದು . ಶಾಲೆಗಳಲ್ಲಿ ಪ್ರತೀ ವರ್ಷ ದೇಶಭಕ್ತಿಯೊಂದಿಗೆ , ಗೌರವಪೂರ್ವಕವಾಗಿ ರಾಷ್ಟ್ರಗೀತೆಯನ್ನು ಒಕ್ಕೊರಲಿನಲ್ಲಿ ಹೇಳಿ , ನಮ್ಮ ದೇಶದ ಹೆಮ್ಮೆಯ ತಿರಂಗಾ ಬಾವುಟವನ್ನು ಹಾರಿಸುವ ಮೂಲಕ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ . ರಾಷ್ಟ್ರಧ್ವಜ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರವು , ನಮ್ಮ ದೇಶದ ಬಾವುಟ ಸಂಹಿತೆ 2002 ರೂಪಿಸಲಾಗಿದೆ . ಅದರಂತೆ , ಬಾವುಟದ ಅಳತೆ ಎಂದರೆ ಉದ್ದ ಮತ್ತು ಎತ್ತರ 3:2 ಅನುಪಾತದಲ್ಲಿರಬೇಕು . ಬಾವುಟ ತಯಾರಿಸಲು ಉಣ್ಣೆಯ ಅಥವಾ ಹತ್ತಿಯ ಅಥವಾ ರೇಷ್ಮೆಯ ದಾರದಿಂದ ನೇಯ್ದ ಬಟ್ಟೆಯನ್ನು ಮಾತ್ರ ಉಪಯೋಗಿಸಬೇಕು . ರಾಷ್ಟ್ರಧ್ವಜವು ಆಯತಾಕಾರವಾಗಿದ್ದು , ಅದ...